Telegram Join My Telegram WhatsApp Join My WhatsApp

Indian Navy Agniveer Recruitment 2026: ಮಾರ್ಚ್ 14ರಿಂದ ಅರ್ಜಿ ಆರಂಭ – 30,000 ವೇತನ, ಅರ್ಹತೆ, ಕೊನೆಯ ದಿನಾಂಕ ಸಂಪೂರ್ಣ ಮಾಹಿತಿ…

ಭಾರತೀಯ ನೌಕಾಪಡೆಯಲ್ಲಿ ಸೇವೆ ಮಾಡಲು ಆಸಕ್ತಿ ಹೊಂದಿರುವ ಯುವಕರಿಗೆ ದೊಡ್ಡ ಅವಕಾಶ ಸಿಕ್ಕಿದೆ. Indian Navy ಇದೀಗ ಅಗ್ನಿಪಥ ಯೋಜನೆಯಡಿ (Agnipath Scheme) Agniveer Recruitment 2026 ಅಧಿಸೂಚನೆಯನ್ನು ಅಧಿಕೃತವಾಗಿ ಪ್ರಕಟಿಸಿದೆ.

ಈ ನೇಮಕಾತಿಯಡಿ SSR, MR ಮತ್ತು SSR Medical Assistant ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು 2026 ಮಾರ್ಚ್ 14 ರಿಂದ ಏಪ್ರಿಲ್ 6, 2026ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿಯ ಮೂಲಕ ಭಾರತೀಯ ನೌಕಾಪಡೆಯಲ್ಲಿ ಸೇವೆ ಮಾಡುವ ಅವಕಾಶ ದೊರೆಯುವುದರ ಜೊತೆಗೆ ಉತ್ತಮ ವೇತನ ಹಾಗೂ ತರಬೇತಿ ಸೌಲಭ್ಯಗಳು ಕೂಡ ಲಭ್ಯವಾಗುತ್ತವೆ.


ಪ್ರಮುಖ ಮಾಹಿತಿ (Highlights)

  • Indian Navy ವತಿಯಿಂದ Agniveer Recruitment 2026 ಅಧಿಸೂಚನೆ ಪ್ರಕಟ

  • SSR, MR ಮತ್ತು Medical Assistant ಹುದ್ದೆಗಳಿಗೆ ಅರ್ಜಿ ಆಹ್ವಾನ

  • ಆನ್‌ಲೈನ್ ಅರ್ಜಿ ಮಾರ್ಚ್ 14, 2026 ರಿಂದ ಆರಂಭ

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 6, 2026

  • SSR ಮತ್ತು MR ಹುದ್ದೆಗಳಿಗೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

  • Medical Assistant ಹುದ್ದೆಗೆ ಮಾತ್ರ ಪುರುಷ ಅಭ್ಯರ್ಥಿಗಳು ಅರ್ಹರು


ಯಾವ ಹುದ್ದೆಗಳಿಗೆ ನೇಮಕಾತಿ?

ಈ ನೇಮಕಾತಿಯಡಿ ಕೆಳಗಿನ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ:

  • Agniveer Senior Secondary Recruit (SSR)

  • Matric Recruit (MR)

  • SSR Medical Assistant

ಈ ನೇಮಕಾತಿ 01/2027 ಮತ್ತು 02/2027 ತರಬೇತಿ ಬ್ಯಾಚ್‌ಗಳಿಗೆ ನಡೆಯಲಿದೆ.


ಅರ್ಜಿ ಸಲ್ಲಿಸುವ ದಿನಾಂಕಗಳು

ಕಾರ್ಯಕ್ರಮ ದಿನಾಂಕ
ಅಧಿಸೂಚನೆ ಬಿಡುಗಡೆ ಮಾರ್ಚ್ 10, 2026
ಅರ್ಜಿ ಆರಂಭ ಮಾರ್ಚ್ 14, 2026
ಕೊನೆಯ ದಿನಾಂಕ ಏಪ್ರಿಲ್ 6, 2026
ಅರ್ಜಿ ತಿದ್ದುಪಡಿ ಏಪ್ರಿಲ್ 10 – 11, 2026

ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವುದು ಅತ್ಯಂತ ಮುಖ್ಯ.


ಅರ್ಜಿ ಸಲ್ಲಿಸುವ ವಿಧಾನ

ಅಭ್ಯರ್ಥಿಗಳು ಕೆಳಗಿನ ಹಂತಗಳನ್ನು ಅನುಸರಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು:

  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – Join Indian Navy Recruitment Portal

  2. Agniveer SSR/MR Recruitment 2026 ಲಿಂಕ್ ಕ್ಲಿಕ್ ಮಾಡಿ

  3. ನಿಮ್ಮ Email ID ಮತ್ತು Mobile Number ಬಳಸಿ ನೋಂದಣಿ ಮಾಡಿ

  4. ಆನ್‌ಲೈನ್ ಅರ್ಜಿ ಫಾರ್ಮ್ ಭರ್ತಿ ಮಾಡಿ

  5. ಅಗತ್ಯ ದಾಖಲೆಗಳು, ಫೋಟೋ ಮತ್ತು ಸಹಿಯನ್ನು ಅಪ್ಲೋಡ್ ಮಾಡಿ

  6. ₹550 + 18% GST ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ

  7. ಎಲ್ಲಾ ವಿವರಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಿ

  8. Confirmation Page ಅನ್ನು ಡೌನ್‌ಲೋಡ್ ಮಾಡಿ


ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

Indian Navy Agniveer ನೇಮಕಾತಿ ಎರಡು ಹಂತಗಳಲ್ಲಿ ನಡೆಯಲಿದೆ.

ಹಂತ – 1

Indian Navy Entrance Test (INET) 2026

  • ಕಂಪ್ಯೂಟರ್ ಆಧಾರಿತ ಪರೀಕ್ಷೆ

  • ತಾತ್ಕಾಲಿಕವಾಗಿ ಮೇ 2026ರಲ್ಲಿ ನಡೆಯುವ ಸಾಧ್ಯತೆ

ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ.

ಹಂತ – 2

ಮುಂದಿನ ಹಂತದಲ್ಲಿ ಅಭ್ಯರ್ಥಿಗಳಿಗೆ ಕೆಳಗಿನ ಪರೀಕ್ಷೆಗಳು ನಡೆಯುತ್ತವೆ:

  • Physical Fitness Test (PFT)

  • Written Test

  • Medical Examination

NCC ‘C’ Certificate ಹೊಂದಿರುವ ಅಭ್ಯರ್ಥಿಗಳಿಗೆ INET ಪರೀಕ್ಷೆಯಿಂದ ವಿನಾಯಿತಿ ದೊರೆಯುತ್ತದೆ.


ವೇತನ ಎಷ್ಟು ಸಿಗುತ್ತದೆ?

Agnipath Scheme ಅಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲ ವರ್ಷದಲ್ಲಿ ₹30,000 ಮಾಸಿಕ ವೇತನ ನೀಡಲಾಗುತ್ತದೆ.

ನಾಲ್ಕು ವರ್ಷದ ಸೇವಾ ಅವಧಿಯಲ್ಲಿ ಈ ವೇತನ ಕ್ರಮೇಣ ಹೆಚ್ಚುತ್ತದೆ.


ತರಬೇತಿ ಎಲ್ಲ ನಡೆಯುತ್ತದೆ?

ಆಯ್ಕೆಯಾದ ಅಭ್ಯರ್ಥಿಗಳಿಗೆ ಮೂಲ ತರಬೇತಿ INS Chilka (ಒಡಿಶಾ) ನಲ್ಲಿ ನಡೆಯಲಿದೆ.

  • 01/2027 ಬ್ಯಾಚ್ – ಡಿಸೆಂಬರ್ 2026

  • 02/2027 ಬ್ಯಾಚ್ – ಮೇ 2027


ಅರ್ಹತೆ (Eligibility)

ಯಾರು ಅರ್ಜಿ ಸಲ್ಲಿಸಬಹುದು?

  • SSR ಮತ್ತು MR – ಅವಿವಾಹಿತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು

  • SSR Medical Assistant – ಕೇವಲ ಅವಿವಾಹಿತ ಪುರುಷ ಅಭ್ಯರ್ಥಿಗಳು


ವಯೋಮಿತಿ

01/2027 ಬ್ಯಾಚ್

  • 1 ಡಿಸೆಂಬರ್ 2004 ರಿಂದ

  • 31 ಮೇ 2009 ನಡುವೆ ಜನಿಸಿದವರು

02/2027 ಬ್ಯಾಚ್

  • 1 ಮೇ 2005 ರಿಂದ

  • 31 ಅಕ್ಟೋಬರ್ 2009 ನಡುವೆ ಜನಿಸಿದವರು


ಶಿಕ್ಷಣ ಅರ್ಹತೆ

SSR ಹುದ್ದೆ

  • 10ನೇ ಮತ್ತು 12ನೇ ತರಗತಿ ಪಾಸ್

  • Mathematics ಮತ್ತು Physics ವಿಷಯಗಳೊಂದಿಗೆ

  • ಕನಿಷ್ಠ 50% ಅಂಕಗಳು

ಅಥವಾ

  • 3 ವರ್ಷದ Engineering Diploma

  • ಅಥವಾ 2 ವರ್ಷದ Vocational Course


MR ಹುದ್ದೆ

  • ಮಾನ್ಯ ಮಂಡಳಿಯಿಂದ 10ನೇ ತರಗತಿ ಪಾಸ್

  • ಕನಿಷ್ಠ 50% ಅಂಕಗಳು


SSR Medical Assistant

  • 10ನೇ ಮತ್ತು 12ನೇ ತರಗತಿ ಪಾಸ್

  • Physics, Chemistry, Biology ವಿಷಯಗಳೊಂದಿಗೆ

  • ಕನಿಷ್ಠ 50% ಒಟ್ಟು ಅಂಕಗಳು

  • ಪ್ರತಿ ವಿಷಯದಲ್ಲಿ ಕನಿಷ್ಠ 40% ಅಂಕಗಳು

Leave a Comment